ಗಾಗರ್ಯ 2
ಒಬ್ಬ ಋಷಿ. ರಾಮಾಯಣದ ಪ್ರಕಾರ ಅಂಗಿರಸನ ವಂಶದವ. ಕೇಕಯ ದೇಶದ ಅಧಿಪತಿಯಾಗಿದ್ದ ಈತ ಯುಧಾಜಿತನ ಪುರೋಹಿತ. ಗಂಧರ್ವ ದೇಶವನ್ನು ಗೆಲ್ಲುವ ಉದ್ದೇಶದಿಂದ ಯುಧಾಚಿತ ಹತ್ತು ಸಾವಿರ ಕುದುರೆಗಳನ್ನೂ ಅನೇಕ ರತ್ನಾಭರಣಗಳನ್ನೂ ಈತನ ಮೂಲಕ ಶ್ರೀರಾಮನಿಗೆ ಕಾಣಿಕೆಯಾಗಿ ಕೊಟ್ಟಿದ್ದ.

ಹರಿವಂಶದ ಪ್ರಕಾರ ಗಾಗರ್ಯನ ವೇಣುಹೊತ್ರನ ಮಗ. ಪಾಂಡವರ ಮೂಲ ಪುರುಷನಾದ ಜನಮೇಜಯರಾಯ ಗಾಗರ್ಯ ಮಗನನ್ನು ಹಿಂಸೆಮಾಡಿ ಬ್ರಹ್ಮಹತ್ಯೆಗೆ ಗುರಿಯಾಗಿ ಶೌನಕ ಮುನಿಯ ಮೂಲಕ ಯಜ್ಞ ಮಾಡಿಸಿ ಆ ಪಾತಕವನ್ನು ಕಳೆದುಕೊಂಡ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ